ಭಾರತದಲ್ಲಿ ಡಿಜಿಟಲ್ ಪೇಮೆಂಟ್ ವ್ಯವಸ್ಥೆ ದಿನದಿಂದ ದಿನಕ್ಕೆ ಹೆಚ್ಚು ಜನಪ್ರಿಯವಾಗುತ್ತಿದೆ. ಮೊದಲು ಹಣ ಪಾವತಿ ಮಾಡಲು ನಗದು ಅಥವಾ ಬ್ಯಾಂಕ್ ಟ್ರಾನ್ಸ್ಫರ್ಗಳ ಮೇಲೆ ಅವಲಂಬಿಸಬೇಕಾಗಿತ್ತು. ಆದರೆ ಈಗ ಯುಪಿಐ (UPI) ಸೇವೆಗಳು ಬಂದ ನಂತರ ಜನರು ಕೆಲವೇ ಕ್ಷಣಗಳಲ್ಲಿ ಪಾವತಿ ಮಾಡುವ ವ್ಯವಸ್ಥೆಯನ್ನು ಬಳಸುತ್ತಿದ್ದಾರೆ. ಈ ಯುಪಿಐ ಸೇವೆಗಳಲ್ಲಿ PhonePe ಅತ್ಯಂತ ಜನಪ್ರಿಯವಾದ ಪೇಮೆಂಟ್ ಆ್ಯಪ್ ಆಗಿದ್ದು, ಕೋಟ್ಯಾಂತರ ಬಳಕೆದಾರರು ಇದನ್ನು ದಿನನಿತ್ಯ ಬಳಸುತ್ತಿದ್ದಾರೆ.
ಈ ನಡುವೆ PhonePe ತನ್ನ ಬಳಕೆದಾರರಿಗೆ ಹೊಸ ಸಂತಸದ ಸುದ್ದಿಯನ್ನು ನೀಡಿದೆ. PhonePe ಮೂಲಕ ಪಾವತಿ ಮಾಡುವವರಿಗೆ ಕ್ಯಾಶ್ಬ್ಯಾಕ್ ನೀಡುವ ವಿಶೇಷ ಆಫರ್ಗಳನ್ನು ಬಿಡುಗಡೆ ಮಾಡಲಾಗಿದೆ. ಈ ಆಫರ್ ಮೂಲಕ ಬಳಕೆದಾರರು ಪಾವತಿ ಮಾಡುವಾಗ ಹಣ ಉಳಿಸಿಕೊಳ್ಳುವ ಅವಕಾಶ ಪಡೆಯುತ್ತಿದ್ದಾರೆ.